ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಹಿರಿಯ ಭಾಗವತ ಕಡತೋಕಾ ಲಕ್ಷ್ಮಿನಾರಾಯಣ ಭಾಗವತರ ಸನ್ಮಾನ

ಲೇಖಕರು :
ಕಡತೋಕಾ ಗೋಪಾಲಕೃಷ್ಣ ಭಾಗವತ
ಭಾನುವಾರ, ಸೆಪ್ಟೆ೦ಬರ್ 13 , 2015
ಸೆಪ್ಟೆ೦ಬರ್ 13, 2015

ಹಿರಿಯ ಭಾಗವತ ಕಡತೋಕಾ ಲಕ್ಷ್ಮಿನಾರಾಯಣ ಭಾಗವತರ ಸನ್ಮಾನ

ಶಿರಸಿ : ಇದು 86 ವರ್ಷ ಪ್ರಾಯದ ಬಡಾಬಡಗುತಿಟ್ಟಿನ ಸಾಂಪ್ರದಾಯಿಕ ಭಾಗವತಿಕೆಯ ಅತ್ಯಂತ ಹಿರಿಯ ಭಾಗವತ ಕಡತೋಕಾ ಲಕ್ಷ್ಮಿನಾರಾಯಣ ಭಾಗವತರನ್ನು ಶ್ರೀ ಸಂಸ್ಥಾನ ಸ್ವರ್ಣವಲ್ಲಿಯಲ್ಲಿ ನಡೆಯುತ್ತಿರುವ 3 ದಿನಗಳ ‘ಗೀತನೃತ್ಯಾನುಸಂಧಾನ’ ಯಕ್ಷಗಾನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣೀಕ, ನೃತ್ಯ ಪಟು ಅಶ್ವಥ್ ಹರಿತಾಸ್ ಮೊದಲಾದ ಗಣ್ಯರ ಸಮಕ್ಷ್ಮಮದಲ್ಲಿ ಸನ್ಮಾನಿಸಿದ ಸಂದರ್ಭ.

ಸನ್ಮಾನ ಸ್ವೀಕರಿಸಿದ ಭಾಗವತರು ‘ಯಕ್ಷಗಾನ ಭಾಗವತಿಕೆಯಲ್ಲಿ ಇಂದು ಸಿನಿಮಾ ಶೈಲಿಯಲ್ಲಿ ಹಾಡಲಾಗುತ್ತದೆ. ಇದು ಸರಿಯಲ್ಲ. ಯಕ್ಷಗಾನವನ್ನು ಯಕ್ಷಗಾನ ಶೈಲಿಯಲ್ಲಿಯೇ ಹಾಡಿ ರಂಜಿಸಲು ಸಾಧ್ಯವಿದೆ. ಯಕ್ಷಗಾನ ಪ್ರದರ್ಶನ ನೋಡುವಾಗಲೂ ಇಂದಿನ ಪ್ರೇಕ್ಷಕರಿಗೆ ರಾಮಾಯಣ ಮಹಾಭಾರತ ಮೊದಲಾದ ಪುರಾಣಗಳ ಪರಿಚಯವಿಲ್ಲ. ಇದಕ್ಕೆ ಶಿಕ್ಷಣದಲ್ಲಿ ರಾಮಾಯಣ ಮಹಾಭಾರತಗಳನ್ನು ಅಳವಡಿಸದಿರುವುದೂ ಒಂದು ಕಾರಣ. ಆದ್ದರಿಂದಲೇ ಸುಧನ್ವಾರ್ಜುನ ಪ್ರಸಂಗ ನೋಡಿದ ಪ್ರೇಕ್ಷಕರನೇಕರಿಗೆ ಕೊನೆಗೆ ಸಾಯುವವನು ಸುಧನ್ವನೋ ಅರ್ಜುನನೋ ಎಂದು ತಿಳಿಯದ ಪರಿಸ್ಥಿತಿಯಿದೆ. ಪ್ರೇಕ್ಷಕರು ಪುರಾನ ಜ್ಞಾನವನ್ನು ಬೆಳೆಸಿಕೊಂಡು ಆಟ ನೋಡಿದಾಗ ಮಾತ್ರ ಯಕ್ಷಗಾನವನ್ನು ಸರಿಯಾಗಿ ಆಸ್ವಾದಿಸಿ ಕಲಾವಿದರ ಮೌಲ್ಯಮಾಪನವನ್ನು ಸರಿಯಾಗಿ ಮಾಡಲು ಸಾಧ್ಯ’ ಎಂದು ನುಡಿದರು





ಕೃಪೆ : facebook.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ